ರಕ್ತದಾನದ ಅರ್ಹತೆ ಮತ್ತು ಮುನ್ನೆಚ್ಚರಿಕೆಗಳು
ವೈದ್ಯಕೀಯ ನಿಯಮಗಳನ್ನು ಪಾಲಿಸಿದಾಗ ರಕ್ತದಾನವು ಸಂಪೂರ್ಣ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ. ರಕ್ತದಾನ ಮಾಡುವ ಮುನ್ನ ಈ ಕೆಳಗಿನ ಮಾನದಂಡಗಳನ್ನು ಪರಿಶೀಲಿಸಿ.
ವಯಸ್ಸಿನ ಮಿತಿ
18 - 65 ವರ್ಷ
ಕನಿಷ್ಠ ೧೮ ವರ್ಷ ತುಂಬಿರಬೇಕು. ನಿಯಮಿತ ದಾನಿಗಳು ವೈದ್ಯಕೀಯ ತಪಾಸಣೆಯ ನಂತರ ೬೫ ವರ್ಷದವರೆಗೆ ರಕ್ತದಾನ ಮಾಡಬಹುದು.
ಕನಿಷ್ಠ ತೂಕ
≥ 45 kg
೩೫೦ ಮಿ.ಲೀ ರಕ್ತದಾನಕ್ಕೆ ಕನಿಷ್ಠ ೪೫ ಕೆ.ಜಿ ತೂಕವಿರಬೇಕು. ೪೫೦ ಮಿ.ಲೀ ರಕ್ತ ಸಂಗ್ರಹಕ್ಕೆ ೫೫ ಕೆ.ಜಿ ತೂಕವಿರಬೇಕು.
ಹಿಮೋಗ್ಲೋಬಿನ್ ಪ್ರಮಾಣ
≥ 12.5 g/dL
ರಕ್ತದಾನದ ಮುನ್ನ ರಕ್ತನಿಧಿ ಕೇಂದ್ರದಲ್ಲಿ ಉಚಿತವಾಗಿ ಬೆರಳ ತುದಿಯಿಂದ ರಕ್ತದ ಹನಿಯನ್ನು ಪರೀಕ್ಷಿಸಲಾಗುತ್ತದೆ.
ವಿಶ್ರಾಂತಿ ಅವಧಿ
90ದಿನ / 120ದಿನ
ಪುರುಷರು: 90 ದಿನಗಳು (೩ ತಿಂಗಳು)
ಮಹಿಳೆಯರು: 120 ದಿನಗಳು (೪ ತಿಂಗಳು)
ತಾತ್ಕಾಲಿಕ ವಿಶ್ರಾಂತಿ ನಿಯಮಗಳು
ಈ ಕೆಳಗಿನ ಸಂದರ್ಭಗಳಲ್ಲಿ ರಕ್ತದಾನ ಮಾಡುವ ಮುನ್ನ ನಿಗದಿತ ಅವಧಿ ಕಾಯಬೇಕಾಗುತ್ತದೆ:
- ಹಚ್ಚೆ (Tattoo), ಪಿಯರ್ಸಿಂಗ್ ಮಾಡಿಸಿಕೊಂಡಿದ್ದರೆ ೬ - ೧೨ ತಿಂಗಳು
- ದೊಡ್ಡ ಶಸ್ತ್ರಚಿಕಿತ್ಸೆ (Major Surgery) ೬ ತಿಂಗಳು
- ಹಲ್ಲು ಕೀಳಿಸಿಕೊಂಡಿದ್ದರೆ (Dental extraction) ೩ - ೭ ದಿನಗಳು
- ಆಂಟಿಬಯೋಟಿಕ್ಸ್ ಅಥವಾ ಇನ್‌ಫೆಕ್ಷನ್ ಔಷಧಿ ಸೇವನೆ ಔಷಧಿ ಮುಗಿದ ೧೪ ದಿನಗಳ ನಂತರ
- ಮದ್ಯಪಾನ ಸೇವನೆ ಕನಿಷ್ಠ ೨೪ ಗಂಟೆಗಳು
- ಗರ್ಭಾವಸ್ಥೆ ಮತ್ತು ಹಾಲುಣಿಸುವ ಅವಧಿ ಹೆರಿಗೆಯ ೧೨ ತಿಂಗಳ ನಂತರ
ಶಾಶ್ವತ ರಕ್ತದಾನ ನಿಷೇಧಗಳು
ಸುರಕ್ಷತೆಯ ದೃಷ್ಟಿಯಿಂದ, ಈ ಕೆಳಗಿನ ಆರೋಗ್ಯ ಸಮಸ್ಯೆಗಳಿದ್ದಲ್ಲಿ ರಕ್ತದಾನ ಮಾಡಲು ಸಾಧ್ಯವಿಲ್ಲ:
- ಎಚ್‌ಐವಿ (HIV), ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ಪಾಸಿಟಿವ್ ಇದ್ದಲ್ಲಿ.
- ಹೃದಯ ಸಂಬಂಧಿ ಕಾಯಿಲೆಗಳು, ತೀವ್ರ ಅಸ್ತಮಾ ಅಥವಾ ಕ್ಯಾನ್ಸರ್ ಇತಿಹಾಸವಿದ್ದಲ್ಲಿ.
- ಇನ್ಸುಲಿನ್ ಆಧಾರಿತ ಸಕ್ಕರೆ ಕಾಯಿಲೆ (Type 1 Diabetes).
- ರಕ್ತ ಹೆಪ್ಪುಗಟ್ಟುವಿಕೆಯ ತೊಂದರೆಗಳು (Bleeding disorders).
- ದೀರ್ಘಕಾಲದ ಮೂತ್ರಪಿಂಡ ಅಥವಾ ಯಕೃತ್ತಿನ ಗಂಭೀರ ಕಾಯಿಲೆಗಳು.
ರಕ್ತದಾನದ ಮುನ್ನ, ಸಮಯದಲ್ಲಿ ಮತ್ತು ನಂತರದ ಮುನ್ನೆಚ್ಚರಿಕೆಗಳು
ದೇಹವನ್ನು ಸಜ್ಜುಗೊಳಿಸಿ
- ರಕ್ತದಾನಕ್ಕೆ ೩೦ ನಿಮಿಷ ಮುನ್ನ ೫೦೦ ಮಿ.ಲೀ ನೀರು ಅಥವಾ ಹಣ್ಣಿನ ರಸ ಕುಡಿಯಿರಿ.
- ೩-೪ ಗಂಟೆ ಮುನ್ನ ಪೌಷ್ಟಿಕ ಲಘು ಆಹಾರ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ರಕ್ತದಾನ ಮಾಡಬೇಡಿ.
- ಅತಿಯಾದ ಎಣ್ಣೆಯುಕ್ತ ಆಹಾರ ತ್ಯಜಿಸಿ.
- ಹಿಂದಿನ ರಾತ್ರಿ ಕನಿಷ್ಠ ೬-೮ ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ.
ಶಾಂತವಾಗಿರಿ ಮತ್ತು ಉಸಿರಾಡಿ
- ಸೂಜಿ ಚುಚ್ಚುವುದು ಕೇವಲ ೧ ಸೆಕೆಂಡ್ ಮಾತ್ರ; ರಕ್ತ ಸಂಗ್ರಹಕ್ಕೆ ೭-೧೦ ನಿಮಿಷ ಹಿಡಿಯುತ್ತದೆ.
- ಬಳಸುವ ಎಲ್ಲಾ ಉಪಕರಣಗಳು ೧೦೦% ಸೋಂಕುರಹಿತ ಮತ್ತು ಏಕ-ಬಳಕೆಯವು (Disposable).
- ತಲೆಸುತ್ತು ಅಥವಾ ಅಸ್ವಸ್ಥತೆ ಎನಿಸಿದರೆ ತಕ್ಷಣ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿ.
ವಿಶ್ರಾಂತಿ ಮತ್ತು ದ್ರವಾಹಾರ
- ರಕ್ತದಾನದ ನಂತರ ಹಾಸಿಗೆಯ ಮೇಲೆ ೧೦-೧೫ ನಿಮಿಷ ವಿಶ್ರಾಂತಿ ಪಡೆಯಿರಿ.
- ನೀಡಲಾಗುವ ತಿಂಡಿ ಮತ್ತು ಹಣ್ಣಿನ ರಸವನ್ನು ಸೇವಿಸಿ.
- ಕೈಗೆ ಹಾಕಿದ ಪಟ್ಟಿಯನ್ನು ಕನಿಷ್ಠ ೪ ಗಂಟೆಗಳ ಕಾಲ ತೆಗೆಯಬೇಡಿ.
- ೨೪ ಗಂಟೆಗಳ ಕಾಲ ಭಾರ ಎತ್ತುವುದು ಅಥವಾ ಕಠಿಣ ವ್ಯಾಯಾಮ ಮಾಡಬೇಡಿ.